Thursday, 16 December 2010



ನಾ ಹೇಳಬೇಕಂದಿದೆಷ್ಟೋ ನಿನಗೆ ಹೇಳದಾದೆನು
ನಾ ಕೇಳಬೇಕಂದಿದೆಷ್ಟೋ ನಿನಗೆ ಕೇಳದಾದೆನು

ನಾ ಹೇಳಿದ್ದು ನಿನಗೆ ಪೂರ್ಣ ಅರ್ಥವಾಗಲಿಲ್ಲವೋ
ನಿನಗೆ ಅವು ಅರ್ಥವಾಗಿರಬೇಕಿರಲಿಲ್ಲವೋ
ಸಂಗಡ ನೀರಿರಬೇಕಾದಾಗ ಇಲ್ಲವಾದೆ ನೀನು
ನಿನಗೆ ಬೇಕಾದಾಗ ಜೊತೆಯಾಗಲಾದೆನು ನಾನು
ಜೀವನದ ಜೋಕಾಲಿಯಲಿ ಸಾಗಲಾರೆವಾದವೆ
ಇಂದು ಎಂದು ಕೊನೆಯವರೆಗೂ ಬಾಳಲಿ

--ಮನು

Sunday, 28 November 2010

ನಾನ್ಯಾರು?



ಸ್ವಲ್ಪ ಮುಂಗೋಪಿ,ಸ್ವಲ್ಪ ಭಾವ ಜೀವಿ, ನೇರ ನಡುವಳಿಕೆ, ಸ್ವಲ್ಪ ಕೊಬ್ಬಿದ ಬಂಡ, ಇದು ನಾನು.
ನಾನು ಆರಿಸೋ ಸ್ನೇಹಿತರು ಬಹುಪಾಲು ಹೀಗೆನೆ.ಇದು like poles attractionನ್ನೋ ಅಥವಾ just happensಸೋ ಗೊತ್ತಿಲ್ಲ .ಇವುಗಳು ಜಾಸ್ತಿಯಾದಾಗಲೇ ಸಮಸ್ಯ. ಸಮಸ್ಯಗಿಂತ ಇಂಥವರಿಂದ ದೂರ ಉಳಿಯೋ ದಾರಿ ಆರಿಸಿಬಿಡುವುದು ನನ್ನ ಆಯ್ಕೆ.

ನನ್ನಲ್ಲಿಯ ದ್ವಂದ್ವ.

ನೆಲ್ಮೆಯ ಸ್ನೇಹಿತರಿದ್ದರೂ ಆ ಒಬ್ಬ ನನ್ನ ಆತ್ಮೀಯ ಇನ್ನೂ ಸಿಕ್ಕಿಲ್ಲ.ನನ್ನ ಎಷ್ಟೋ ಸೋಲು ಗೆಲುವುಗಳು ನನ್ನ ಸುಖ ದುಃಖಗಳು ಅದರಿಂದಿನ ಒಂದಿಷ್ಟು ಕ್ಷಣಗಳು ನನ್ನಲ್ಲೇ ಉಳಿದಿವೆ.ಇದನ್ನೆಲ್ಲಾ ಹೇಳಿಕೊಳ್ಳಲು ಹಂಚಿಕೊಳ್ಳಲು ಇನ್ನೊಂದು ಮನಸ್ಸಿರಬೇಕೆನಿಸೋದು ಉಂಟು.ಆ ಮನಸ್ಸು ನನ್ನ ಆತ್ಮೀಯ ಸ್ನೇಹಿತನಾಗಿದ್ದರೆ ಎಷ್ಟು ಚೆನ್ನ.
ಆದರೆ ಆ ಆತ್ಮೀಯ ಸಿಕ್ಕಿದ ಮೇಲೂ ಸಹ ನಾನು ನನ್ನೆಲ್ಲಾ ಗುಟ್ಟುಗಳನ್ನು ಹಂಚಿಕೊಳ್ಳುವೆನಾ?
ಗೊತ್ತಿಲ್ಲ

ಆದರೆ ಕೆಲವೊಮ್ಮೆ ಒಂಟಿತನ ಹಿಡಿಸೋದು ಉಂಟು.ನೆನಪಿನ ಹಾಳೆಗಳನ್ನು ತಿರಿವಿ,ಒಂದಷ್ಟು ಹಗಲು ಕನಸುಗಳನ್ನು ಕಂಡಲ್ಲಿ ,ಹಳೆಯ ಭಾವ ಚಿತ್ರಗಳನ್ನು ಕಂಡಾಗ ಮನಸ್ಸು ಉಕ್ಕುವ ಹಿತ ತಿಳಿ ಭಾವ. ಆದರೆ ಇದೇ ಒಂಟಿತನ ಒಮ್ಮೊಮ್ಮೆ ಅತಿಯಾಗಿ ಖಿನ್ನತೆ ಭಾವ,ಮಂಕು ತರಿಸುವುದೂ ಹೌದು.


So ನಾನು ನನ್ನ ಪ್ರಪಂಚದ ಒಂದು ತುಣುಕಿದು.ನನ್ನ ಪ್ರಪಂಚ ಅರ್ಥವಾಗುವುದು ಸುಲಭ ಆದರೆ ನಾನು ಅರ್ಥವಾಗುವುದು ಕಷ್ಟ.ಇದು ನಾನು ಮತ್ತೇ ನೀನು?


--ಮನು

Tuesday, 3 August 2010

ನನ್ನ ಸಮಾಧಿಯ ಬಳಿ ನಿಂತು ನೀ ದುಃಖಿಸದಿರು

(ಮೇರಿ ಎಲಿಜಬೆತ್ ಫ್ರೈ ರ ಕವನ ಅನುವಾದ)




















ನನ್ನ ಸಮಾಧಿಯ ಬಳಿ ನಿಂತು ನೀ ದುಃಖಿಸದಿರು
ಅಲ್ಲಿ ನಾನು ಮಲಗಿ ನಿದ್ರಿತ್ತಿಲ್ಲ ಅಲ್ಲಿ ನಾನಿಲ್ಲ.

ಬೀಸುವ ತಂಪಾದ ತಂಗಾಳಿಯಲ್ಲಿರುವೆ ನಾ
ಬೀಳುವ ಮೃದು ಹಿಮದಲ್ಲಿರುವೆ ನಾ
ಸುರಿಯುವ ತುಂತುರು ಮಳೆಯಲ್ಲಿರುವೆ ನಾ
ತೋಟದಲ್ಲರಳುವ ಸುಮದಲ್ಲಿರುವೆ ನಾ
ಮುಂಜಾನೆಯ ಹಸಿ ಮೌನದಲ್ಲಡಗಿರುವೆ ನಾ
ವಿನಯಶೀಲ ಚಟುವಟಿಕೆಯಲ್ಲಿರುವೆ ನಾ

ನಾನಿರುವೆ ಸಾಲಾಗಿ ಹಾರುವ ಪಕ್ಷಿಗಳ ಸಾಲಲ್ಲಿ
ನಾನಿರುವೆ ರಾತ್ರಿ ಮಿನುಗುವ ನಕ್ಷತ್ರಗಳ ಹೊಳಪಲ್ಲಿ
ನಾನಿರುವೆ ಕೋಣೆಯಲ್ಲಡಗಿರುವ ನೀರವತೆಯಲ್ಲಿ
ನಾನಿರುವೆ ಪ್ರತಿಯೊಂದು ಪ್ರೀತಿಯ ನೋಟದಲ್ಲಿ

ನನ್ನ ಸಮಾಧಿಯ ಬಳಿ ನಿಂತು ನೀ ದುಃಖಿಸದಿರು
ಅಲ್ಲಿ ನಾನಿಲ್ಲ.ನಾನು ಮರಣಿಸಿಲ್ಲ.


ನನ್ನ ಆತ್ಮೀಯ ಗೆಳೆಯ ಮುರುಗೇಶನ ನೆನಪಿನಲ್ಲಿ
ಸಾವು ಜೀವಕಷ್ಟೇ ನಮ್ಮ ಬಂಧಗಳಿಗಲ್ಲ.
murugeshs-memory-alive
--ಮನು

Saturday, 31 July 2010

ಮುಂಗಾರಿನಲ್ಲಿ ಧಾರಾಕಾರ ಮಳೆಯಾಗಬಾರದು! ಆದರೂ ಆಗುತ್ತಿದೆ ಏಕೆ

The dramatic recovery in the monsoon in the last seven days notwithstanding, the head of the India Meteorological Department (IMD) has warned against a structural shift in the pattern of the annual rainfall that could yet force a change in cropping pat- terns in the country.
While IMD maintained the situation was still being re- viewed, it said that some of the adverse climate conditions of last year, which eventually resulted in a drought, seem to be playing out in the current year too.
Typically, rain-bearing depressions, a precursor to cyclones in the Bay of Bengal and originating along the east coast of India, bring rains to key rice, oilseed and wheat-growing regions such as eastern Uttar Pradesh, Jharkhand, Madhya Pradesh and Orissa. The “abnormal conditions“ are now threatening the dependability of the monsoon.
“There have been no depressions and few low pressure systems (a prelude to a depression) over the Bay of Bengal,“ said Ajit Tyagi, IMD director general. “If such a situation persists for few more years, then the whole monsoon itself will be affected. Why all of this is happening is still an open research question, and we, too, are trying to understand this.“
Other experts said that bar- ring El Nino (a heating of waters in the central Pacific region associated with droughts over India), monsoon conditions this year were similar to last year, which saw India's worst drought in 37 years and indirectly worsened food price inflation. El Nino did not recur this year.
Until last week, the all-India monsoon deficit was nearly 14%, with most of the shortfall due to limited rains in central and east India. As of Friday, the monsoon deficit improved to 5%, which Madhavan Rajeevan, a senior meteorologist with the Indian Space Research Organisation called a “lucky phenomenon“, rather than a genuine monsoon revival.
Rajeevan said that the key to good rainfall over central and east India were a good number of low-pressure systems. “Normally, July-end should've seen at least seven-eight low pressure systems. This year there were no more than three.
That's been a trend that we've been seeing for a decade, and that's worrying,“ he said.
Low-pressure systems brought moderate drizzles over wide swathes--beneficial for agriculture--and depressions typically lead to concentrated bursts of rainfall.
This year IMD, in its first forecast for the June-September monsoon, had said rainfall would be 102% of the 50-year normal, buoyed by heavy rains in August and September.
The monsoon generates nearly 80% of the annual rain- fall over the country and is vital for the economy, being the main source of water for agriculture, which generates about 17% of India's gross domestic product. Other than the 60% of the country's workforce that depends on agriculture, the rains are also important for traders dealing in food and cash crops as any shortfall can inject volatility in the markets.
The beneficial rains so far this year have largely been due to a phenomenon known as western disturbances that usually lead to pre-monsoon rain, and unusually active pressure systems in the Arabian Sea.
An IMD scientist, who didn't want to be identified, said that changes in cropping patterns would have to be effected to offset shifting monsoon patterns. “There are changes in the monsoon patterns. If Indian farmers refuse to adapt, then there could be a problem.
Western disturbances can't pull the extra weight every year,“ he added.
However, IMD, in a mid- term appraisal of the monsoon on Friday, said that rainfall in August and September would be a staggering 107% of the 50-year average. “That's more statistics than reality,“ said Rajeevan. While he too didn't rule out a normal monsoon, he added that certain parts of India would receive far more rainfall than others.
“Every year, even normal monsoon rainfall (patterns) are different. Most times when one system weakens, another strengthens,“ Rajeevan said.
“Trouble is, it's become harder to say which, and when.“ 

ಸಂಗ್ರಹ ಲೈವ್ ಮಿಂಟ್

--ಮನು

Wednesday, 28 July 2010

ಹೀಗೊಂದು ಅದ್ಭುತ ಹಾಡು

ಸಂಗ್ರಹ ಅರ್ಚನ

ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಭಾರಿಸಿ |ಪ|

ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ..... ದಿವ್ಯ ಪ್ರಭೆಯ ಬೀರುತ |೧|

ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ಗಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ..... ಎನಿತು ಧನ್ಯ ಜೀವನ |೨|

ನಾಡಗುಡಿಯ ಮೂರುಕಡೆಯು ಪೊರೆವ ಶಾಂತ ಸಾಗರ
ಹಿಂದುಜನರ ಹೃದಯವಿಂದು ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ...... ಕಾಲ ಯಮನು ಕಿಂಕರ |೩|

ಅಸುರತನದ ಉಸಿರ ನೀಗಿ ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ..... ಹರಸು ತಾಯೆ ಭಾರತಿ |೪|


--ಮನು

Tuesday, 27 July 2010

ಸಿ.ಎಮ್.ಇಬ್ರಾಹಿಂ--ಮೌಲ್ಯವರ್ಧಿತ ರಾಜಕಾರಣಿಯೇ?

ಮೌಲ್ಯವರ್ಧಿತ ರಾಜಕಾರಣಿ ಎಂದು ಕರೆಸಿಕೊಳ್ಳುವ ಸಿ.ಎಮ್.ಇಬ್ರಾಹಿಂ ಹೇಳಿರುವ ಮಾತುಗಳ ಮಟ್ಟ ಅವರ ವ್ಯಕ್ತಿತ್ವಕ್ಕೆ ತಕ್ಕದ್ದೆ?.ಮಾತಿನ ಮಲ್ಲ ಎನಿಸಿಕೊಂಡಿದ್ದಾದರೂ ಈ ಪೋಲಿ ಮಾತುಗಳು ಸಮಾಜದ ಮುಖಂಡರಾಗಿರುವ ನೀವು , ದೇವೇಗೌಡರ ಹಾದಿಹಿಡಿದಿದ್ದರೆ ಜನಸಾಮಾನ್ಯರು ಚಿ..ಥೂ...ಎಂದಾರು.ಸುಲಲಿತವಾಗಿ ಬಸವಣ್ಣನ ವಚನಗಳನ್ನು ಹೇಳುವ ನೀವು ಕೇವಲ ಬಾಯಿಪಾಟ ಮಾಡುವ ಬದಲು ಸ್ವಲ್ಪ ಅರ್ಥೈಸಿಕೊಂಡಿದ್ದಾರೆ ನಿಮ್ಮ ಬದುಕು ಇನ್ನು ಹಸನಾಗಿರುತ್ತಿತ್ತೇನೋ?
ಮಾತಿನ ಮಲ್ಲ ಎಂದು ಸುದ್ದಿವಾಹಿನಿಗಳು ಉಬ್ಬಿಸಿದ್ದರ ಫಲವಿದುವಾ?  

  
--ಮನು

Tuesday, 20 July 2010

ಸಂಶೋಧನೆಗೆ ನಾವು ವಿದೇಶಕ್ಕೇ ಏಕೆ ಹೋಗಬೇಕೆ?

ನಮ್ಮಲ್ಲಿ ಏನು ಕೊರತೆ..

ನನ್ನ ಸ್ನೇಹಿತನೊಬ್ಬ ಹೇಳಿದ ಮಾತು ನೆನಪಿಗೆ ಬಂತು...
ಆತ ಬೆಂಗಳೂರಿನ NIMHANSನಲ್ಲಿ ಸಂಶೋಧಕನಾಗಿದ್ದ.ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹೊರದೇಶದ ವಿದ್ಯಾರ್ಥಿಯೊಬ್ಬನೊಂದಿಗೆ ಮಾತಿಗಿಳಿದಾಗ ಆತ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಶೋಧನೆಯ ಸೌಲಭ್ಯ, ಹಣಕಾಸಿನ ವ್ಯವಸ್ಥೆ ಬಗ್ಗೆ ಹೇಳುತ್ತಾ, ಸಂಶೋಧನೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಇಡುತ್ತಾರೆ ಅಲ್ಲಿನ ಶ್ರೀಮಂತ ಕುಟುಂಬಗಳು, ವಿದ್ಯಾದಾನಿಗಳು,ಮಕ್ಕಳಿಲ್ಲದವರು ತಮ್ಮ ನಂತರ ಆಸ್ತಿ ದಾನ ಮಾಡಲಿಚ್ಚಿಸುವಂತಹವರು ಅವರ ಕುಟುಂಬದ ಹೆಸರಿನಲ್ಲಿ ಹಾಗೂ ಯಾರಾದರು ಅಗಲಿದ ಪ್ರೀತಿಪಾತ್ರರ ಹೆಸರಲ್ಲಿ ಸ್ಕಾಲರ್ಷಿಪ್,ಫಂಡ್ ಎಂದು ಸಂಶೋಧನೆಗೆ ತಗುಲುವ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ನೆರವಾಗುತ್ತಾರಂತೆ.

ಈ ರೀತಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ,ಸಂಶೋಧನೆಗೆ ನೆರವಾಗುವಂತಹ ಹಸ್ತಗಳು ಬಹಳಷ್ಟಿವೆಯಂತೆ.ಈ ರೀತಿ ದಾನ ಸಂಶೋಧನಾ ಕೇಂದ್ರಗಳಿಗೂ ಸಹ ಸಿಗುತ್ತವೆ.latest reasearch equipmentsಗೋಸ್ಕರ ಮತ್ತು ಇನ್ನಿತರ ಸೌಕರ್ಯಕ್ಕೆ.

ನಮ್ಮ ದೇಶದಲ್ಲೂ ಸಹ ಅತಿ ಶ್ರೀಮಂತರು ದಾನ ಮಾಡುತ್ತರೆ.ವಿಪರ್ಯಾಸವೆಂದರೆ ಅದು ಮಠ,ದೇವಸ್ಥಾನ ಇಲ್ಲಿಗೆ ಮೀಸಲ್ಪಟ್ಟಿದೆ.
ಒಮ್ಮೆ ಪತ್ರಿಕೆಯಲ್ಲಿ ___ ಎಂಬ ಶ್ರೀಮಂತರು ತಿರುಪತಿಗೆ ೪೦ಕೋಟಿರೂ ದಾನ,೫೦ಕೋಟಿ ಬೆಲೆಬಾಳುವ ರತ್ನಖಚಿತ ಕಿರೀಟ ಮಾಡಿಸಿದ್ದಾಗಿ ಮುಖಪುಟದಲ್ಲೇ ಸುದ್ದಿ.

ಅಲ್ಲಿಗೆ ಇಷ್ಟು ದುಡ್ಡು ಅಗತ್ಯವೇ?ಅಲ್ಲಿನ ಹುಂಡಿಗೆ ಪ್ರತಿ ವರ್ಷ ಎಷ್ಟು ಸಂಗ್ರಹವಾಗುತ್ತೆ?
ಟಾಟಾ ರವರು ಇವರಂತೆಯೇ ಯೋಚಿಸಿದ್ದಲ್ಲಿ IISC ಇರುತ್ತಿರಲ್ಲಿಲ್ಲವೆನೊ?
ನಮ್ಮಲ್ಲೂ ದಾನಿಗಳೇಕೆ ಅವರಂತೆ ಮಾಡಬಾರದು?ದಾನ ಎಷ್ಟು ಮುಖ್ಯವೋ ಯಾರಿಗೆ ದಾನ ಅಷ್ಟೇ ಮುಖ್ಯವಲ್ಲವೆ?ವಿದ್ಯಾದಾನವು ಶ್ರೇಷ್ಠವಲ್ಲವೆ?

ನಮ್ಮಲ್ಲಿ ಸಂಶೋಧನೆಯಲ್ಲಿ ಸಿಗುವುದು ೫೦೦೦ ಹೆಚ್ಚೂ ಅಂದ್ರೆ ೧೦೦೦೦ ರೂ .ಅದೂ ಬೆಂಗಳೂರಿನಲ್ಲಿ...
ಲ್ಯಾಬ್ ಗಳಲ್ಲಿರೊ ಉಪಕರಣಗಳು ೧೦ರಿಂದ ೨೦ ವರ್ಷ ಹಳೆಯ ತಂತ್ರಜ್ಞಾನದ್ದವು.
೧೦ವರ್ಷ ಹಳೆಯದ್ದು ಕೊಟ್ಟು ಭವಿಶ್ಯದ ಸಂಶೋಧನೆ ಹೇಗೆ ಸಾಧ್ಯ?
ಅದಕ್ಕೆ ಎಲ್ಲರೂ ವಿದೇಶದ ಹಾದಿ ಹಿಡಿದಿರೋದು.ಹೇಳಲು ದುಃಖ ಆಗುತ್ತೆ ಆದರೂ ನಿಜ.

ನಾನು ನಾಸ್ತಿಕನಲ್ಲ.
ಯಾರಿಗಾದರೂ ಬೇಜಾರು ಮಾಡಿದ್ದಲ್ಲಿ ಕ್ಷಮಿಸಿ.


ಮನು

Monday, 19 July 2010

ಸಿ ಬಿ ಐ--The official Interpol unit for india





ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಆಗಲಿ.!ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಆಗಲಿ.!
ರಾಜ್ಯದೆಲ್ಲೆಲ್ಲೂ ಇದೇ ಅಬ್ಬರ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಲೇಖನ ಬರಿಯಲೇಬೇಕೆನಿಸಿತು .

ಸೆಂಟ್ರಲ್ ಬ್ಯೂರೊ ಆಫ್ ಇನ್‍ವೆಸ್ಟಿಗೇಶನ್ ಅನ್ನೋ ಈ ಸಂಸ್ಥೆ ನಮ್ಮ ರಾಷ್ಟ್ರದ ಅತ್ಯುನತ ತನಿಖಾ ಸಂಸ್ಥೆ.೧೯೬೩ ರಲ್ಲಿ ಸ್ಥಾಪನೆಯಾದ ಈ ತನಿಖಾ ಸಂಸ್ಥೆ official Interpol unit for india ಕೂಡಾ ಹೌದು.

ಈ ತನಿಖಾ ಸಂಸ್ಥೆಯ ಕಳೆದ ಕೆಲವು ವರ್ಷಗಳ ಕೆಲವು ಸಾಧನೆಯ ಹಿನ್ನೋಟ.

೧.ತಾಜ್ ಕಾರಿಡಾರ‍್ ೧೫೦ ಕೋಟಿ ಅಕ್ರಮದಲ್ಲಿ ಹಾಗೂ ಹೆಚ್ಚುವರಿ ಆಸ್ತಿ ಹೊಂದಿರುವಂತೆ ಮಾಯಾವತಿ ವಿರುದ್ಧ ಸಿಬಿಐ ತನಿಖೆ.
ಕೆಲವು ತಿಂಗಳುಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿದ ವಿಷಯ .ಅದೇ ಸಮಯದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣೆಯಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಮಂಡನೆ ಘೋಷಿಸಿತು.ಯುಪಿಎ ಸರ್ಕಾರಕ್ಕೆ ಉಳಿವಿನ ಪ್ರಶ್ನೆಯಾಯಿತು. ಕಾಂಗ್ರೆಸ್ ವಿರುದ್ಧ ಮುಖ್ಯವಾಗಿ ಗಾಂಧಿ ಕುಟುಂಬ ವಿರುದ್ಧ ಬೀದಿ ಕಾಳಗಕ್ಕಿಳಿದು ರಂಪ ಮಾಡಿ ತಾನೇ ಮುಂದಿನ ಪ್ರಧಾನಮಂತ್ರಿ ಎಂದೇ ಸಾರುತ್ತಿದ್ದ ಮಾಯಾವತಿ ತನ್ನ ಬಿಎಸ್‍ಪಿ ಪಕ್ಷ ವತಿಯಿಂದ ಯುಪಿಎ ಗೆ ಬೆಂಬಲ ಸೂಚಿಸಿದರು.
ಇದಕ್ಕೆ ಮಾಯಾವತಿ ಕೊಟ್ಟ ಕಾರಣ ಅತಂತ್ರತೆ ನಿರ್ಮಾಣ ಬೇಡವೆಂಬುದು.

ಈ ಕೊಂಡಿ ನೋಡಿ. -> link1  
ಆರಂಭದಲ್ಲಿ ಬಹಳ ಚುರುಕಾಗಿ ಸಾಗಿದ್ದ ಈ ತನಿಖೆ ಬೆಂಬಲ ಘೋಷಣೆ ನಂತರ ಟುಸ್ಸ್ ಆಯಿತು.ಬೆಂಬಲದ ಹಿಂದಿನ ಶರತ್ತೇನು?ಗೊತ್ತಿಲ್ಲ.ಸಿಬಿಐ ಪಾತ್ರವೇನು ಗೊತ್ತಿಲ್ಲ.

೨.ಸಿಖ್ ದಂಗೆಯ ಮುಖ್ಯ ಆಪಾದಿತರಾದ ಕಾಂಗ್ರೆಸ್ ಮುಖಂಡರಾದ ಜಗದೀಶ್ ಟೈಟ್ಲರ್,ಕಮಲ್ ನಾಥ್ ಆರೋಪ ಮುಖ್ತರು ಎಂದು ಸಿಬಿಐ ತೀರ್ಪು.
ಬಹು ಟೀಕೆಗೊಳಗಾದ ಇಂದಿರಾಳ ಆಪರೇಶನ್ ಬ್ಲೂಸ್ಟಾರ್ ತನ್ನ ಪ್ರಾಣಕ್ಕೇ ಸಂಚು ತಂದಿತು.೧೯೮೪ನೇ ಇಸವಿಯಲ್ಲಿ ಇಂದಿರಾ ಹತ್ಯಯ ನಂತರ ಆಕೆ ಸಾವಿಗೆ ಕಾರಣ ಸಿಖ್‍ಜನಾಂಗದವರೆಂಬ ಕಾರಣಕ್ಕೆ ಆಕೆಯ ಮೇಲಿನ ಅತಿರೇಕ ಭಕ್ತಿ ,ಕುರುಡು ಅಭಿಮಾನವಿದ್ದಂತಹವರು ಮಾಡಿದ ಕ್ರೌರ್ಯವದು.೩೦೦೦ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.
ಈ ಕೊಂಡಿ ನೋಡಿ. -> link2
ಬೇರೆ ದೇಶಗಳಲ್ಲಾಗಿದ್ದರೆ ಗಲ್ಲು ಶಿಕ್ಷೆಯಾಗುತಿತ್ತು.ನಮ್ಮಲ್ಲಿ ೨೪ ವರ್ಷ ತಡೆದು ಜನ ಮರೆತರು ಅಂತಾದಾಗ ಮುಕ್ತಿ ಕೊಟ್ಟುಬಿಡುತ್ತಾರೆ.

೩.ಇಟಲಿಯ Ottavio Quattrocchi ನನ್ನು ಬೋಫೋರ್ಸ್ ನಿಂದ ಮುಕ್ತಿಗೊಳಿಸಬೇಕೆಂದು ಸಿಬಿಐ ಸುಪ್ರೀಮ್ ಕೋರ್ಟ್ ನಲ್ಲಿ ಮನವಿ.
೧೯೮೪ ನಂತರದ ದಿನಗಳು.Mr Clean ಎಂದೂ ಅತ್ಯಂತ ಕಿರಿಯ ಪ್ರಧಾನಿ ಎಂದೂ ದೇಶದಲ್ಲೇ ಜನಪ್ರಿಯವಾಗಿದ್ದವರು ರಾಜೇವ್ ಗಾಂಧಿ.16 ಆಪ್ರಿಲ್ 1987 ರಂದು the Swedish State Radio ಸ್ವೀಡನ್ ನ್ನಿನ ರೇಡಿಯೋ "ಬೋಫೋರ್ಸ್"- ಸ್ವೀಡನ್ ನ್ನಿನ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕ ನಡೆಸಿದ under-cover operation ಹಾಗೂ ಅದರಲ್ಲಿನ ಭಾರತ ಸರ್ಕಾರ (ರಾಜೀವ್ ನೇರ) ಪಾಲುದಾರಿಕೆಯನ್ನು ಪ್ರಸಾರ ಮಾಡಿತ್ತು.ಪತ್ರಕರ್ತ ಎನ್ ರಾಮ್ ತನಿಖೆ(journalistic investigation ) ನಡೆಸಿ ಪತ್ರಿಕೆಯಲ್ಲಿ ಪ್ರಕಟಿಸಿದರು.ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಈ ಪ್ರಸಂಗದ ಆಳ ಎಷ್ಟಿತ್ತೆಂದರೆ ಅಂದಿನ ರಾಜೀವ್ ಸರ್ಕಾರದ ರಕ್ಷಣಾ ಮಂತ್ರಿ ವಿಪಿ ಸಿಂಗ್ ಇದು ತನಗೆ ತಿಳಿಯದಂತೆ ಪ್ರಧಾನಮಂತ್ರಿಗಳು ನಡೆಸಿದ್ದ (ಅ)ವ್ಯವಹಾರವೆಂದು ತನಿಖೆಗೆ ಆದೇಶಿಸಿದರು.ಇದಕ್ಕೆ ರಾಜೀವ್ ,ವಿಪಿ ಸಿಂಗ್ ತನಗೆ ತಿಳಿಸದಂತೆ ತನಿಖೆಗೆ ಆದೇಶಿಸಿದ್ದಾರೆಂದು ಆರೋಪಿಸಿದರು ಮತ್ತು ಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು.ಸಿಂಗ್ ಇದು ಅವ್ಯವಹಾರವನ್ನು ಮುಚ್ಚಿಡಲು ನಡೆಸಿದ ಹುನ್ನಾರವೆಂದು ರಾಜಿನಾಮೆಯಿತ್ತರು.ಕೊನೆಗೆ ಸಿಂಗ್‍ರನ್ನು ಕಾಂಗ್ರೆಸ್ ಪಕ್ಷದಿಂದಲೇ ಉಚ್ಛಾಟಿಸಲಾಯಿತು.
ಈ ಕೊಂಡಿ ನೋಡಿ. -> link3
ಈ ಪ್ರಸಂಗದ ನಂತರವೇ ವಿಪಿ ಸಿಂಗ್ ಜನ ಮೋರ್ಚಾ ಪಕ್ಷ ಕಟ್ಟಿದ್ದು ಅದು ನೋತರ "ಜನತಾ ದಳ"ದ ರೂಪ ಪಡೆದಿದ್ದು.ಇದರ ನಂತರ ನಡೆದ ಚುಣಾವಣೆಯಲ್ಲಿ ಕಾಂಗ್ರೆಸ್ 401 ರಿಂದ 193seatಗೆ ಇಳಿಯಲು ಈ ಮೇಲೆ ನಡೆದ ಘಟನೆಗಳೂ ಸಾಕಷ್ಟು ತೂಕ ಪಡೆಯುತ್ತವೆ.

೪.ಇನ್ನು ಇತ್ತೀಚೆಗೆ ಹೊರಬಂದಂತಹ ತೀರ್ಪು:ಬೊಪಾಲ್ ಅನಿಲ ದುರಂತ ಕಮಲ್ ನಾಥ್ ,ಅರ್ಜುನ್ ಸಿಂಗ್ ಆರೋಪದಿಂದ ಮುಕ್ತಿ.
ಹದಿನೈದು ಸಾವಿರಕ್ಕೂ ಹೆಚ್ಚು ಪ್ರಾಣಗಳನ್ನು ಬಲಿತೆಗೆದುಕೊಂಡದ್ದು ಈ ಘಟನೆ ತನಿಖೆ ಸಿಬಿಐನದ್ದೇ.
ಈ ಕೊಂಡಿ ನೋಡಿ. -> link4
ಈ ಕೊಂಡಿ ನೋಡಿ. -> link5
ಈ ಕೊಂಡಿ ನೋಡಿ. -> link6

೫.ಮುಲಾಯಂ ಸಿಂಗ್ ವಿರುದ್ಧ ಬ್ರಷ್ಟಾಚಾರ ಹಾಗೂ ಲಲ್ಲೂ ವಿರುದ್ಧದ ಬಹುಕೋಟಿ ಮೇವು ಹಗರಣದ ತನಿಖೆ ನಡೆಸಿದ್ದವರೂ ಸಿಬಿಐ ನವರೇ.
ಮುಲಾಯಂಗೆ ಮುಕ್ತಿವೆಂಬುದು ಯುಪಿಎ ಬೆಂಬಲಕೊಟ್ಟಿ ಸಿಕ್ಕಿತು.ಇನ್ನೂ ಲಾಲೂ ರೈಲ್ವೇ ಮಂತ್ರಿಯಾದ ಕಥೆ ಎಲ್ಲರಿಗೂ ತಿಳಿದಿದ್ದೇ.
ಈ ಕೊಂಡಿ ನೋಡಿ. -> link7

೬.ಬಹುಕೋಟಿ ನಕಲಿ ಛಾಪಾಕಾಗದ ಆರೋಪಿ ಕರೀಂಲಾಲ ತೆಲಗಿ ಏನಾದ.?ಪಾಪ ಅವನದ್ದೇ ಒಂದು ಪಕ್ಷ ಒಂದಷ್ಟು ಎಂಪಿಗಳಿಲ್ಲದಿರುವುದೇ ಅವನ ತಪ್ಪಾಯಿತೇನೋ?

ಒಂದೆಂತೂ ಸ್ಪಷ್ಟ.ಸಿಬಿಐ ನನ್ನು ಕೇಂದ್ರ ಆಡಳಿತ ಪಕ್ಷ ರಾಜಕೀಯ ಬಲೆಯಂತೆ ಉಪಯೋಗಿಸಿಕೊಳ್ಳುತ್ತಿರುವುದು.
ಹಾಗಾದಲ್ಲಿ ನಮ್ಮ ರಾಜ್ಯದಲ್ಲಿ ಈಗ ಎಲ್ಲೆಲ್ಲೂ.. ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಆಗಲಿ.!ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಆಗಲಿ.! ಎಂದು ಎದ್ದಿರುವ ಸಿಬಿಐ ಹವೆಯ ಒಳ ಉದ್ದೇಶವೇನು? ತನಿಖೆ ಸಿಬಿಐ ಗೆ ವಹಿಸಿದಲ್ಲಿ ನಿಶ್ಪಕ್ಷವಾದ ತನಿಖೆ ಖಂಡಿತವಾಗಿಯೂ ನಡೆಯುತ್ತದೆಯೇ?ಕೇವಲ ರೆಡ್ಡಿಗಳನ್ನು ತನಿಖೆಯಿಂದ ಬಗ್ಗಿಸಿ ಅವರಿಂದ ಲಾಭ(Party Fund)ಪಡೆಯುವುದಿಲ್ಲವೆಂದೂ, ಅವರನ್ನೇ ಒಂದು ರಾಜಕೀಯ ಗಾಳ ಮಾಡಿಕೊಳ್ಳುವುದಿಲ್ಲವೆಂದೂ ಏನು ಗ್ಯಾರಂಟಿ?

ದೇವೇಗೌಡರು ಹೇಳುವಂತೆ ಸಿಬಿಐ congress bureau of investigation ಆಗಿದೆಯೇ?

ಪ್ರಶ್ನೆ ಒಂದು ಕಾಡುತ್ತೆ! ವಿರೋಧ ಪಕ್ಷದ ನಾಯಕರಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ನಿಜವಾದ ಕಳಕಳಿ ಇದೆಯೇ?! ಇದ್ದಲ್ಲಿ ಪ್ರಾಮಾಣಿಕ ತನಿಖೆ ಜೊತೆಗೆ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಗೊಳಿಸಿ ಬರುವ ಲಾಭ ನೇರವಾಗಿ ಸರ್ಕಾರಕ್ಕೆ ಸೇರಲಿ ಎಂಬ ಬೇಡಿಕೆ ಇಡಬಹುದಲ್ಲವೇ?.ಸಮಗ್ರ ಗಣಿಗಾರಿಕೆಯಿಂದ ಆಗುತ್ತಿರುವ ಪರಿಸರ ಅಸಮತೋಲನ ಬಗ್ಗೆ ಕೂಡ ಗಮನ ಹರಿಸಬಹುದಲ್ಲವೇ?

ಸಣ್ಣವನಿದ್ದಾಗ ನೋಡಿದ ಸಿಬಿಐ ಶಂಕರ್ ಸಿನಿಮಾ ಶಂಕರ್ ನಾಗ್ ಮೇಲಿನ ಅಬಿಮಾನದ ಜೊತೆಗೆ ಸಿಬಿಐ ಅಧಿಕಾರಿಯಾಗಬೇಕೆಂಬ ಕನಸೊಂದು ಮೂಡಿಸಿತ್ತು.ಆದರೆ ಏಕೋ ಆ ಆಸೆ ಈಗಿಲ್ಲ.


--ಮನು