Sunday, 28 November 2010

ನಾನ್ಯಾರು?



ಸ್ವಲ್ಪ ಮುಂಗೋಪಿ,ಸ್ವಲ್ಪ ಭಾವ ಜೀವಿ, ನೇರ ನಡುವಳಿಕೆ, ಸ್ವಲ್ಪ ಕೊಬ್ಬಿದ ಬಂಡ, ಇದು ನಾನು.
ನಾನು ಆರಿಸೋ ಸ್ನೇಹಿತರು ಬಹುಪಾಲು ಹೀಗೆನೆ.ಇದು like poles attractionನ್ನೋ ಅಥವಾ just happensಸೋ ಗೊತ್ತಿಲ್ಲ .ಇವುಗಳು ಜಾಸ್ತಿಯಾದಾಗಲೇ ಸಮಸ್ಯ. ಸಮಸ್ಯಗಿಂತ ಇಂಥವರಿಂದ ದೂರ ಉಳಿಯೋ ದಾರಿ ಆರಿಸಿಬಿಡುವುದು ನನ್ನ ಆಯ್ಕೆ.

ನನ್ನಲ್ಲಿಯ ದ್ವಂದ್ವ.

ನೆಲ್ಮೆಯ ಸ್ನೇಹಿತರಿದ್ದರೂ ಆ ಒಬ್ಬ ನನ್ನ ಆತ್ಮೀಯ ಇನ್ನೂ ಸಿಕ್ಕಿಲ್ಲ.ನನ್ನ ಎಷ್ಟೋ ಸೋಲು ಗೆಲುವುಗಳು ನನ್ನ ಸುಖ ದುಃಖಗಳು ಅದರಿಂದಿನ ಒಂದಿಷ್ಟು ಕ್ಷಣಗಳು ನನ್ನಲ್ಲೇ ಉಳಿದಿವೆ.ಇದನ್ನೆಲ್ಲಾ ಹೇಳಿಕೊಳ್ಳಲು ಹಂಚಿಕೊಳ್ಳಲು ಇನ್ನೊಂದು ಮನಸ್ಸಿರಬೇಕೆನಿಸೋದು ಉಂಟು.ಆ ಮನಸ್ಸು ನನ್ನ ಆತ್ಮೀಯ ಸ್ನೇಹಿತನಾಗಿದ್ದರೆ ಎಷ್ಟು ಚೆನ್ನ.
ಆದರೆ ಆ ಆತ್ಮೀಯ ಸಿಕ್ಕಿದ ಮೇಲೂ ಸಹ ನಾನು ನನ್ನೆಲ್ಲಾ ಗುಟ್ಟುಗಳನ್ನು ಹಂಚಿಕೊಳ್ಳುವೆನಾ?
ಗೊತ್ತಿಲ್ಲ

ಆದರೆ ಕೆಲವೊಮ್ಮೆ ಒಂಟಿತನ ಹಿಡಿಸೋದು ಉಂಟು.ನೆನಪಿನ ಹಾಳೆಗಳನ್ನು ತಿರಿವಿ,ಒಂದಷ್ಟು ಹಗಲು ಕನಸುಗಳನ್ನು ಕಂಡಲ್ಲಿ ,ಹಳೆಯ ಭಾವ ಚಿತ್ರಗಳನ್ನು ಕಂಡಾಗ ಮನಸ್ಸು ಉಕ್ಕುವ ಹಿತ ತಿಳಿ ಭಾವ. ಆದರೆ ಇದೇ ಒಂಟಿತನ ಒಮ್ಮೊಮ್ಮೆ ಅತಿಯಾಗಿ ಖಿನ್ನತೆ ಭಾವ,ಮಂಕು ತರಿಸುವುದೂ ಹೌದು.


So ನಾನು ನನ್ನ ಪ್ರಪಂಚದ ಒಂದು ತುಣುಕಿದು.ನನ್ನ ಪ್ರಪಂಚ ಅರ್ಥವಾಗುವುದು ಸುಲಭ ಆದರೆ ನಾನು ಅರ್ಥವಾಗುವುದು ಕಷ್ಟ.ಇದು ನಾನು ಮತ್ತೇ ನೀನು?


--ಮನು

No comments:

Post a Comment