ನಮ್ಮಲ್ಲಿ ಏನು ಕೊರತೆ..
ನನ್ನ ಸ್ನೇಹಿತನೊಬ್ಬ ಹೇಳಿದ ಮಾತು ನೆನಪಿಗೆ ಬಂತು...
ಆತ ಬೆಂಗಳೂರಿನ NIMHANSನಲ್ಲಿ ಸಂಶೋಧಕನಾಗಿದ್ದ.ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹೊರದೇಶದ ವಿದ್ಯಾರ್ಥಿಯೊಬ್ಬನೊಂದಿಗೆ ಮಾತಿಗಿಳಿದಾಗ ಆತ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಶೋಧನೆಯ ಸೌಲಭ್ಯ, ಹಣಕಾಸಿನ ವ್ಯವಸ್ಥೆ ಬಗ್ಗೆ ಹೇಳುತ್ತಾ, ಸಂಶೋಧನೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಇಡುತ್ತಾರೆ ಅಲ್ಲಿನ ಶ್ರೀಮಂತ ಕುಟುಂಬಗಳು, ವಿದ್ಯಾದಾನಿಗಳು,ಮಕ್ಕಳಿಲ್ಲದವರು ತಮ್ಮ ನಂತರ ಆಸ್ತಿ ದಾನ ಮಾಡಲಿಚ್ಚಿಸುವಂತಹವರು ಅವರ ಕುಟುಂಬದ ಹೆಸರಿನಲ್ಲಿ ಹಾಗೂ ಯಾರಾದರು ಅಗಲಿದ ಪ್ರೀತಿಪಾತ್ರರ ಹೆಸರಲ್ಲಿ ಸ್ಕಾಲರ್ಷಿಪ್,ಫಂಡ್ ಎಂದು ಸಂಶೋಧನೆಗೆ ತಗುಲುವ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ನೆರವಾಗುತ್ತಾರಂತೆ.
ಈ ರೀತಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ,ಸಂಶೋಧನೆಗೆ ನೆರವಾಗುವಂತಹ ಹಸ್ತಗಳು ಬಹಳಷ್ಟಿವೆಯಂತೆ.ಈ ರೀತಿ ದಾನ ಸಂಶೋಧನಾ ಕೇಂದ್ರಗಳಿಗೂ ಸಹ ಸಿಗುತ್ತವೆ.latest reasearch equipmentsಗೋಸ್ಕರ ಮತ್ತು ಇನ್ನಿತರ ಸೌಕರ್ಯಕ್ಕೆ.
ನಮ್ಮ ದೇಶದಲ್ಲೂ ಸಹ ಅತಿ ಶ್ರೀಮಂತರು ದಾನ ಮಾಡುತ್ತರೆ.ವಿಪರ್ಯಾಸವೆಂದರೆ ಅದು ಮಠ,ದೇವಸ್ಥಾನ ಇಲ್ಲಿಗೆ ಮೀಸಲ್ಪಟ್ಟಿದೆ.
ಒಮ್ಮೆ ಪತ್ರಿಕೆಯಲ್ಲಿ ___ ಎಂಬ ಶ್ರೀಮಂತರು ತಿರುಪತಿಗೆ ೪೦ಕೋಟಿರೂ ದಾನ,೫೦ಕೋಟಿ ಬೆಲೆಬಾಳುವ ರತ್ನಖಚಿತ ಕಿರೀಟ ಮಾಡಿಸಿದ್ದಾಗಿ ಮುಖಪುಟದಲ್ಲೇ ಸುದ್ದಿ.
ಅಲ್ಲಿಗೆ ಇಷ್ಟು ದುಡ್ಡು ಅಗತ್ಯವೇ?ಅಲ್ಲಿನ ಹುಂಡಿಗೆ ಪ್ರತಿ ವರ್ಷ ಎಷ್ಟು ಸಂಗ್ರಹವಾಗುತ್ತೆ?
ಟಾಟಾ ರವರು ಇವರಂತೆಯೇ ಯೋಚಿಸಿದ್ದಲ್ಲಿ IISC ಇರುತ್ತಿರಲ್ಲಿಲ್ಲವೆನೊ?
ನಮ್ಮಲ್ಲೂ ದಾನಿಗಳೇಕೆ ಅವರಂತೆ ಮಾಡಬಾರದು?ದಾನ ಎಷ್ಟು ಮುಖ್ಯವೋ ಯಾರಿಗೆ ದಾನ ಅಷ್ಟೇ ಮುಖ್ಯವಲ್ಲವೆ?ವಿದ್ಯಾದಾನವು ಶ್ರೇಷ್ಠವಲ್ಲವೆ?
ನಮ್ಮಲ್ಲಿ ಸಂಶೋಧನೆಯಲ್ಲಿ ಸಿಗುವುದು ೫೦೦೦ ಹೆಚ್ಚೂ ಅಂದ್ರೆ ೧೦೦೦೦ ರೂ .ಅದೂ ಬೆಂಗಳೂರಿನಲ್ಲಿ...
ಲ್ಯಾಬ್ ಗಳಲ್ಲಿರೊ ಉಪಕರಣಗಳು ೧೦ರಿಂದ ೨೦ ವರ್ಷ ಹಳೆಯ ತಂತ್ರಜ್ಞಾನದ್ದವು.
೧೦ವರ್ಷ ಹಳೆಯದ್ದು ಕೊಟ್ಟು ಭವಿಶ್ಯದ ಸಂಶೋಧನೆ ಹೇಗೆ ಸಾಧ್ಯ?
ಅದಕ್ಕೆ ಎಲ್ಲರೂ ವಿದೇಶದ ಹಾದಿ ಹಿಡಿದಿರೋದು.ಹೇಳಲು ದುಃಖ ಆಗುತ್ತೆ ಆದರೂ ನಿಜ.
ನಾನು ನಾಸ್ತಿಕನಲ್ಲ.
ಯಾರಿಗಾದರೂ ಬೇಜಾರು ಮಾಡಿದ್ದಲ್ಲಿ ಕ್ಷಮಿಸಿ.
ಮನು

No comments:
Post a Comment