Wednesday, 28 July 2010

ಹೀಗೊಂದು ಅದ್ಭುತ ಹಾಡು

ಸಂಗ್ರಹ ಅರ್ಚನ

ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಭಾರಿಸಿ |ಪ|

ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ..... ದಿವ್ಯ ಪ್ರಭೆಯ ಬೀರುತ |೧|

ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ಗಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ..... ಎನಿತು ಧನ್ಯ ಜೀವನ |೨|

ನಾಡಗುಡಿಯ ಮೂರುಕಡೆಯು ಪೊರೆವ ಶಾಂತ ಸಾಗರ
ಹಿಂದುಜನರ ಹೃದಯವಿಂದು ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ...... ಕಾಲ ಯಮನು ಕಿಂಕರ |೩|

ಅಸುರತನದ ಉಸಿರ ನೀಗಿ ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ..... ಹರಸು ತಾಯೆ ಭಾರತಿ |೪|


--ಮನು

No comments:

Post a Comment