Tuesday, 12 April 2011

ವಿದಾಯ



ನಿಯತಿ ಕಂಡ ದುರಂತಕ್ಕೆ ನನ್ನ ತಪ್ಪೆಲ್ಲಿ
ತುಂಬುವೆ ಎಲ್ಲಿ ನೀನು ಆ ದುಃಖದ ಸರಿತೂಕ

ಭಕ್ತಿ ಭಯ ಸತ್ತಿವೆ ನನ್ನಲ್ಲಿ ನಿನಗೆಂದು ಪ್ರಶ್ನೆಗಳಷ್ಟೆ ಉಳಿದಿವೆ
ಮನಸ್ಸಿನ ಪ್ರತಿಭಟನೆಯಿದು ನಿನ್ನನ್ನು ನಾನೇಕೆ ಪೂಜಿಸಲಿ

ಸಾಕಿನ್ನು ಅಭಿಮಾನವಿಲ್ಲದೆ ನಿನ್ನನ್ನು ಧ್ಯಾನಿಸಲಾರೆ
ಮುಗಿಯಿತು ನಮ್ಮ ನಂಟು ನಿನಗೆ ದೈವ ಎನ್ನಲಾರೆ


--ಮನು