Tuesday, 12 April 2011
Thursday, 31 March 2011
ನೀನೇನಾ ಭಗವಂತಾ!!!
ಜಗಕುಪಕರಿಸಿ ನನಗಪಕರಿಸೋ ನೀನಾ ಭಗವಂತಾ
ಹೂ ಸೌಗಂಧವ ಲೇಪಿಸಿ ಹಾಡಿ ಕರೆದರು ಕರುಣಿಸೆ ಕೃಪೆಯಿಲ್ಲ
ಜಗದೋದ್ಧಾರಕ ನೀನೇನಾ, ನೀನೇನಾ
ಒಡ ಹುಟ್ಟಿದವಳ ಬದುಕಲ್ಲಿ ಇರುಳು ಮೂಡಿಸಿದೆಯಲ್ಲಾ
ಒಡ ಹುಟ್ಟಿದವಳ ಬದುಕಲ್ಲಿ ಇರುಳು ಮೂಡಿಸಿದೆಯಲ್ಲಾ
ಜಗಕುಪಕರಿಸಿ ನನಗಪಕರಿಸೋ ನೀನಾ ಭಗವಂತಾ
ನಶ್ವರ ಭೋಗದ ಆಸೆ ಕಡಲಲಿ ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ ದೈವೋತ್ತಮ ಬಿರುದೇಕಯ್ಯ
ಧರ್ಮ ಕರ್ಮಗಳ ಕಣ್ಣು ಕುರುಡಾಯಿತೇ
ಕರುಣೆ ಮಮತೆ ಹಸುಳೆಗೆ ಬೇಡವೆನಿಸೀತೇ
ನೀ ಕೊಟ್ಟಂತಹ ಅಂತ್ಯಕ್ಕೆ ಇರಲಿ ನಿನ್ನಲಿ ಪ್ರೀತಿ
ಕರುಣೆ ಮಮತೆ ಹಸುಳೆಗೆ ಬೇಡವೆನಿಸೀತೇ
ನೀ ಕೊಟ್ಟಂತಹ ಅಂತ್ಯಕ್ಕೆ ಇರಲಿ ನಿನ್ನಲಿ ಪ್ರೀತಿ
ಇರುವೆ ಎಲ್ಲಿ ಶೂನ್ಯ ಜಗದಿ
ಜಗಕುಪಕರಿಸಿ ನನಗಪಕರಿಸೋ ನೀನೇನಾ ಭಗವಂತಾ
--ಮನು
Sunday, 16 January 2011
Subscribe to:
Posts (Atom)

